ನೆನಪುಗಳ ತೀರದಿ ಕಣ್ಣ ಮಿಟಿಕಿಸುತಾ ಅಲೆದಾಡುತಿರುವೆ ಊಹೆಗೂ ನಿಲುಕದ ನನ್ನ ಮನದಂಗಳದಿ ಸುಳಿದಾಡುತಿರುವೆ ಆಗೊಮ್ಮೆ ಈಗೊಮ್ಮೆ ಮಿಂಚಿನಂತೆ ಬಂದು ನೀ ಹೊಳೆಯಲು ಪರಿತಪಿಸುವುದು ನಾ ತಿಳಿಯದೆ ನನ್ನೀ ಮನವೆಂಬ ಕಡಲು ಕಳೆಯೋಣ ದಿನವಿಡೀ ಹೀಗೆಯೇ ಕಣ್ಣ ಮುಚ್ಚಾಲೆಯಾಡುತಾ ಸನಿಹವಾಗಲಿ ಮನವು ತಿಳಿಯದೆ ನಿನ್ನಲಿ ವಿಲೀನವಾಗುತಾ ವರುಷಗಳೆ ಸಾಗಲಿ ಅಳಿಸಲಾಗದು ಆ ಸುಂದರ ಕ್ಷಣಗಳನು ವರ್ಣಿಸಲಾಗದು ಇಂದಿಗೂ ಮುಗಿಯದ ಸುಂದರ ಅಧ್ಯಾಯವನು ❤ಜೇಎಮ್ಎಚ್